ರಚನೆ : ಪುರಂದರ ದಾಸರು
ರಾಗ : ಮಲಹರಿ
೧. ಲಂಬೋದರ ಲಕುಮಿಕರ
ತಾಳ : ರೂಪಕ
ಪಲ್ಲವಿ
ಲಂಬೋದರ ಲಕುಮಿಕರ ಅಂಬಾಸುತ ಅಮರವಿನುತ ||
೧. ಲಂಬೋದರ ಲಕುಮಿಕರ
ತಾಳ : ರೂಪಕ
ಪಲ್ಲವಿ
ಲಂಬೋದರ ಲಕುಮಿಕರ ಅಂಬಾಸುತ ಅಮರವಿನುತ ||
ಚರಣ
ಶ್ರೀ ಗಣನಾಥ ಸಿಂಧೂರ ವರ್ಣ ಕರುಣಾ ಸಾಗರ ಕರಿವದನ || ೧ ||ಸಿದ್ಧಚಾರಣ ಗಣಸೇವಿತ ಸಿದ್ಧಿವಿನಾಯಕ ತೇ ನಮೋ ನಮೋ || ೨ ||
ಸಕಲ ವಿದ್ಯಾ ಆದಿ ಪೂಜಿತ ಸರ್ವೋತ್ತಮ ತೇ ನಮೋ ನಮೋ || ೩ ||
೨. ಕುಂದ ಗೌರ
ತಾಳ : ರೂಪಕ
ಕುಂದ ಗೌರ ಗೌರೀವರ ಮಂದಿರಾಯ ಮಾನ ಮಕುಟ ||
ಮಂದಾರ ಕುಸುಮಾಕರ ಮಕರಂದಂ ವಾಸಿತುವಾ || ೧ ||
ಹೇಮಕೂಟ ಸಿಂಹಾಸನ ವಿರೂಪಾಕ್ಷ ಕರುಣಾಕರ ||
ಮಂದಾರ ಕುಸುಮಾಕರ ಮಕರಂದಂ ವಾಸಿತುವಾ || ೨ ||
ಚಂದಮಾಮ ಮಂದಾಕಿನಿ ಮಂದಿರಾಯ ಮಾನ ಮಕುಟ ||
ಮಂದಾರ ಕುಸುಮಾಕರ ಮಕರಂದಂ ವಾಸಿತುವಾ || ೩ ||
ಮಂದಾರ ಕುಸುಮಾಕರ ಮಕರಂದಂ ವಾಸಿತುವಾ || ೧ ||
ಹೇಮಕೂಟ ಸಿಂಹಾಸನ ವಿರೂಪಾಕ್ಷ ಕರುಣಾಕರ ||
ಮಂದಾರ ಕುಸುಮಾಕರ ಮಕರಂದಂ ವಾಸಿತುವಾ || ೨ ||
ಚಂದಮಾಮ ಮಂದಾಕಿನಿ ಮಂದಿರಾಯ ಮಾನ ಮಕುಟ ||
ಮಂದಾರ ಕುಸುಮಾಕರ ಮಕರಂದಂ ವಾಸಿತುವಾ || ೩ ||
೩. ಕೆರೆಯ ನೀರನು
ತಾಳ : ತ್ರಿಪುಟ
ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ||
ಹರಿಯ ಕರುಣದೊಳಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೊ ||
ಶ್ರೀ ಪುರಂದರ ವಿಠ್ಠಲ ರಾಯನ ಚರಣ ಕಮಲವ ನಂಬಿ ಬದುಕಿರೊ ||
ಹರಿಯ ಕರುಣದೊಳಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೊ ||
೪. ಪದುಮನಾಭ
ತಾಳ : ತ್ರಿಪುಟ
ಪದುಮನಾಭ ಪರಮ ಪುರುಷ ಪರಂಜ್ಯೋತಿ ಸ್ವರೂಪ ||
ವಿದುರ ವಂದ್ಯ ವಿಮಲ ಚರಿತ ವಿಹಂಗಾದಿ ರೋಹಣ ||
ಉದದಿ ನಿವಾಸ ಉರಗ ಶಯನ ಉನ್ನತೋನ್ನತ ಮಹಿಮ ||
ಯದುಕುಲೋತ್ತನ ಯಜ್ಞ ರಕ್ಷಕ ಅಜ್ಞ ಶಿಕ್ಷಕ ರಾಮ ನಾಮ ||
ಶುಭಪ್ರದ ಸುಮನೋಹರ ಸುರೇಂದ್ರ ಮನೋರಂಜನ ||
ಅಭಿನವ ಪುರಂದರ ವಿಠ್ಠಲ ಬಲ್ಲರೆ ರಾಮನಾಮ ||
(Search text in English for search engines)
Pillari Geethegalu Lyrics in Kannada
Purandaradasa
Lambodara Lakumikara
Kunda Gaura Gaureevara
Kereya Neeranu Kerege Chelli
Padumanabha Parama Purusha