ರಾಮಸೇವಾ ಮಂಡಳಿಯಂದ ಇಂದು ಪದ್ಮವಿಭೂಷಣ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ಸರೋದ್ ವಾದನ ಕಛೇರಿ ನಡೆಯಿತು. ತಬ್ಲಾದಲ್ಲಿ ಪೂನಾದ ಪಂಡಿತ್ ವಿಜಯ್ ಘಾಟೆ ಸಾಥ್ ನೀಡಿದರು. ಮೊತ್ತ ಮೊದಲು ಉಸ್ತಾದರು ಈಮನಿ ಶಂಕರ ಶಾಸ್ತ್ರಿಗಳ ಜೊತೆ ಇಲ್ಲಿ ಬಂದು ಜುಗಲ್ ಬಂದಿ ನಡೆಸಿಕೊಟ್ಟಿದ್ದರಂತೆ.
ಪಿಟೀಲು, ಸಿತಾರ್, ವೀಣೆ ನುಡಿಸುವಾಗ ಎಡಗೈ ಬೆರಳಿನ ತುದಿಗಳನ್ನು ಉಪಯೋಗಿಸುತ್ತಾರೆ. ಆದರೆ ಸರೋದ್ ನಲ್ಲಿ ಎಡಗೈ ಉಗುರಿನ ತುದಿಗಳನ್ನು ಉಪಯೋಗಿಸುತ್ತಾರೆ. ಬೆರಳಿನ ತುದಿಗಳನ್ನು ಉಪಯೋಗಿ ನುಡಿಸಿದರೆ ಬೇರೆ ಶಬ್ದ ಬರುತ್ತೆ. ಇದನ್ನು ಉಸ್ತಾದರು ಮಾಡಿ ತೋರಿಸಿದರು. ಉಗುರಿನ ತುದಿಗಳನ್ನು ಉಪಯೋಗಿಸುವುದರಿಂದ ಅವುಗಳಲ್ಲಿ ಗೀರು(ಸಂದುಗೆರೆ) ಆಗುತ್ತವೆ. ಆದ್ದರಿಂದ ಮಧ್ಯೆ ಮಧ್ಯೆ ಉಗುರುಗಳನ್ನು ಸಣ್ಣ ಅರದಿಂದ ಉಜ್ಜಿ ಸರಿಪಡಿಸುತ್ತಿದ್ದರು.
ವೇದಿಕೆ ಮೇಲೆ ಬಿಟ್ಟು ಉಳಿದೆಲ್ಲಾ ವಿದ್ಯುದ್ದೀಪಗಳನ್ನು ಆರಿಸಿ ಕಛೇರಿ ಕೇಳಲು ಒಂದು ಒಳ್ಳೆಯ ವಾತಾವರಣನನ್ನು ಸೃಷ್ಟಿಸಿದ್ದರು. ಜೊತೆಗೆ ವಿದ್ಯುತ್ ಉಳಿತಾಯವೂ ಆಯಿತು.
ಇಬ್ಬರೂ ಕಲಾವಿದರು ಅತ್ಯುತ್ತಮವಾಗಿ ನುಡಿಸಿ ಸಭಿಕರಿಗೆ ಒಳ್ಳೆಯ ಮನರಂಜನೆ ಒದಗಿಸಿದರು.
ಅವರು ನುಡಿಸಿದ ರಾಗಗಳು/ರಚನೆಗಳು : ಪಿಟೀಲು, ಸಿತಾರ್, ವೀಣೆ ನುಡಿಸುವಾಗ ಎಡಗೈ ಬೆರಳಿನ ತುದಿಗಳನ್ನು ಉಪಯೋಗಿಸುತ್ತಾರೆ. ಆದರೆ ಸರೋದ್ ನಲ್ಲಿ ಎಡಗೈ ಉಗುರಿನ ತುದಿಗಳನ್ನು ಉಪಯೋಗಿಸುತ್ತಾರೆ. ಬೆರಳಿನ ತುದಿಗಳನ್ನು ಉಪಯೋಗಿ ನುಡಿಸಿದರೆ ಬೇರೆ ಶಬ್ದ ಬರುತ್ತೆ. ಇದನ್ನು ಉಸ್ತಾದರು ಮಾಡಿ ತೋರಿಸಿದರು. ಉಗುರಿನ ತುದಿಗಳನ್ನು ಉಪಯೋಗಿಸುವುದರಿಂದ ಅವುಗಳಲ್ಲಿ ಗೀರು(ಸಂದುಗೆರೆ) ಆಗುತ್ತವೆ. ಆದ್ದರಿಂದ ಮಧ್ಯೆ ಮಧ್ಯೆ ಉಗುರುಗಳನ್ನು ಸಣ್ಣ ಅರದಿಂದ ಉಜ್ಜಿ ಸರಿಪಡಿಸುತ್ತಿದ್ದರು.
ವೇದಿಕೆ ಮೇಲೆ ಬಿಟ್ಟು ಉಳಿದೆಲ್ಲಾ ವಿದ್ಯುದ್ದೀಪಗಳನ್ನು ಆರಿಸಿ ಕಛೇರಿ ಕೇಳಲು ಒಂದು ಒಳ್ಳೆಯ ವಾತಾವರಣನನ್ನು ಸೃಷ್ಟಿಸಿದ್ದರು. ಜೊತೆಗೆ ವಿದ್ಯುತ್ ಉಳಿತಾಯವೂ ಆಯಿತು.
ಇಬ್ಬರೂ ಕಲಾವಿದರು ಅತ್ಯುತ್ತಮವಾಗಿ ನುಡಿಸಿ ಸಭಿಕರಿಗೆ ಒಳ್ಳೆಯ ಮನರಂಜನೆ ಒದಗಿಸಿದರು.
೧. ರಾಗ ಕಮಲಶ್ರೀ
೨. ರಾಗ ಖಮಾಜ್ - ವೈಷ್ಣವ ಜನತೊ - ನರಸಿಂಹ ಮೆಹ್ತಾರ ರಚನೆ
೩. ರಘುಪತಿ ರಾಘವ ರಾಜಾರಾಂ - ವಿಷ್ಣುದಿಗಂಬರ್ ಪಲುಸ್ಕಾರ್ ರವರ ರಚನೆ
೪. ರಾಗ ದರ್ಬಾರಿ ಕಾನಡ (ತಾನ್ ಸೇನ್ ರಚಿಸಿದ ರಾಗ)
೫. ತಬ್ಲಾ ಸೋಲೋ (ತನಿ)
೬. ರಾಗ ಶುಭಲಕ್ಷ್ಮೀ
೭. ಜನಪದ ಗೀತೆ - ರಬೀಂದ್ರನಾಥ ಟ್ಯಾಗೋರ್ ರವರ ರಚನೆ
|| ಶುಭಂ ||
Tags : 71st Ramanavami Music Festival, April-May 2009, Kote High School Grounds, Sri Ramaseva Mandali Chamarajpet Bangalore, Hindustani Classical Music, Sarod recital, Ustad Amjad Ali Khan, Pt Vijay Ghate
No comments:
Post a Comment