07 May 2020

ಶೃಂಗಪುರಾಧೀಶ್ವರೀ ಶಾರದೆ


ಶೃಂಗಪುರಾಧೀಶ್ವರೀ ಶಾರದೆ
ಶುಭಮಂಗಳೆ ಸರ್ವಾಭೀಷ್ಠಪ್ರದೆ || ಪಲ್ಲವಿ ||

ಶಂಕರ ಸನ್ನುತೆ ಶ್ರೀ ಪದ್ಮ ಚರಣೆ |
ಸಕಲಕಲಾ ವಿಶಾರದೆ ವರದೆ ||
ಸಲಹೆನ್ನ ತಾಯೆ ಸಾಮ ಗಾನ ಪ್ರಿಯೆ || ||

ಕರುಣಿಸೆಮ್ಮ ಶೃತಿಗತಿಗಳ ಮಾತೆ |
ಕಮನೀಯ ಸಪ್ತಸ್ವರ ಸುಪೂಜಿತೆ ||
ಕಾವ್ಯ ಗಾನ ಕಲಾ ಸ್ವರೂಪಿಣಿ ||
ಕಾಮಿತದಾಯಿನಿ ಕಲ್ಯಾಣಿ ಜನನಿ || 2 ||


shringapuraadheeshwaree shaarade
Deity : Sharada/Saraswathi
Language : Samskritha
Composer : Padmacharan (Sri A. V. Krishnamachar)
Raga : Kalyani

No comments:

Post a Comment