07 May 2020

ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು

ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು ||
ತ್ರಿಜಗವಂದಿತನಾದ ದೇವ ದೇವನೆ ಶರಣು ||
ಸುಜನರಿಗೆ ವಿಘ್ನವನು ಪರಿಹರಿಪೆ ಶರಣು || ಪಲ್ಲವಿ ||

ಮಂದಮತಿಯನು ಬಿಡಿಸಿ ಚಂದ ಜ್ಞಾನವನಿತ್ತು |
ಇಂದಿರೇಶನ ಪಾದ ಪೊಂದಿಪ್ಪ ತೆರದಿ |
ಸುಂದರಾಂಗನೆ ಪದದ್ವಂದ್ವಕ್ಕೆರಗುವೆ ನಿನ್ನ |
ಸಂದೇಹ ಮಾಡದಲೇ ಇಂದು ಕರುಣಿಪುದೂ || ||

ಹರನ ತನಯನೇ ಕರುಣಾಕರನೇ ಸುರ ನರ ವರದ |
ಮೊರೆಯ ಲಾಲಿಸಿ ಎನ್ನ ಕರಗಳನು ಪಿಡಿದು ||
ಪೊರೆಯದಿದ್ದರೆ ಬಿಡೆನು ನೆರೆದೆ ನಿನ್ನಡಿಗಳನು |
ತೊರೆಯಂದದಲಿ ನೋಡು ಶರಣೆಂಬೆ ನಿನಗೆ || ||

ಸಿದ್ಧಿದಾಯಕ ನಿನ್ನ ಹೊದ್ದಿ ಮೆರೆವೆನು ನಾನು |
ಅಬ್ಧಿ ಶಯನನ ಮಹಿಮೆ ಬದ್ಧದಲ್ಲಿ ಪೇಳ್ವೆ ||
ಶುದ್ಧ ಮತಿಯನು ಕೊಟ್ಟು ಉದ್ಧರಿಸಬೇಕೆನ್ನ |

ಮಧ್ವ ವಲ್ಲಭ ಶ್ರಿ ಕೃಷ್ಣಗತಿಪ್ರಿಯನೇ || ||

gajamukhane siddhidaayakane vandipe sharaNu
Language : Kannada
Deity : Ganesha

No comments:

Post a Comment