07 May 2020

ಲೋಕ ಮಾತೆ ವಿಮಲ ಚರಿತೆ


ಲೋಕ ಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೇ |

ಪಾಕ ಶಾಸನಾದಿ ಮಧ್ಯೆ ಕಮಲಭವನ ಮಡದಿಯೆ || ||

ಕಮಲನಯನ ಇಂದು ಮುಖಿನಿ ಕೋಮಲಾಂಗಿ ಸುಂದರೀ |
ಭ್ರಮರ ವೇಣಿ ಹಂಸ ಗಮನೆ ದೇವಿ ಶಾರದಾಂಬೆಯೇ || ||

ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲ ಲೀಲೆಯಾದೆ |
ವಿದ್ಯೆಗಳನು ಕರುಣಿಸೆಮ್ಮ ದೇವಿ ಶಾರದಾಂಬೆಯೇ || ||


lOkamAthe vimala charithe
Language : Kannada
Deity : Sharade/Saraswathi

No comments:

Post a Comment