ಆನೆ
ಬಂದಿತಮ್ಮ
ಮರಿಯಾನೆ
ಬಂದಿತಮ್ಮ
||
ಪಲ್ಲವಿ
||
ತೊಲಗಿರೆ
ತೊಲಗಿರೆ
ಪರಬ್ರಹ್ಮ
|
ಬಲು ಸರಪಣಿ ಕಡಕೊಂಡು ಬಂತಮ್ಮ || ಅನುಪಲ್ಲವಿ ||
ಬಲು ಸರಪಣಿ ಕಡಕೊಂಡು ಬಂತಮ್ಮ || ಅನುಪಲ್ಲವಿ ||
ಕಪಟ
ನಾಟಕದ
ಮರಿಯಾನೆ
|
ನಿಕಟ
ಸಭೆಯಲಿ
ನಿಂತಾನೆ
||
ಶಕಟನ
ಬಂಡಿಯ
ಮುರಿದಾನೆ
|
ಕಪಟ
ನಾಟಕದಿಂದ
ಸೋದರ
ಮಾವನ
||
ಅಕಟಕಟೆನ್ನದೆ
ಕೊಂದಾನೆ
||
೧
||
ಕೀಳು
ಭುವನವನುಂಡಾನೆ
ಸ್ವಾಮಿ
|
ಬಾಲಕನೆಂಬ
ಚೆಲ್ವಾನೆ
||
ಗೊಲ್ಲ
ಗೋಗಳ
ಕೂಡೆ
ನಲಿದಾನೆ
|
ಚೆಲುವ
ಕಾಳಿಂಗನ
ಹೆಡೆಯಲಾಡುತ್ತ
||
ಸೊಬಗು
ಹೆಚ್ಚಿದ
ಪಟ್ಟದಾನೆ
|
ಮದ
ಸೊಕ್ಕಿ
ಬರುತಾನೆ
||
೨
||
ಭೀಮಾರ್ಜುನರನು
ಗೆಲಿಸ್ಯಾನೆ
|
ಪರಮ
ಭಾಗವತರ
ಪ್ರಿಯಾನೆ
||
ಮುದದಿಂದ
ಮಥುರೆಲಿ
ನಿಂತಾನೆ
|
ಮದಮುಖದಸುರರ
ದಿಗಿಲಿಟ್ಟು
ಕೊಂದ
||
ಪದುಮಲೋಚನ
ಪುರಂದರ
ವಿಠಲನೆಂಬಾನೆ
||
೩
||
aane baMditammaa
Composer : Purandara Dasa
Language : Kannada
Deity : Krishna
No comments:
Post a Comment